ನನ್ನ ಪ್ರಿಯ ದೀಕ್ಷಾ,ಆಶ್ರಿತ, ದೀಕ್ಷಾ ಆಸಕ್ತರೇ, ಶಿಷ್ಯರ ಶಿಷ್ಯರೇ ಮತ್ತು ಶುಭಾಕಾಂಕ್ಷಿಗಳೇ,

ದಯವಿಟ್ಟು ನನ್ನ ಆಶೀರ್ವಾದಗಳು, ಶುಭಾಶಯಗಳು ಮತ್ತು ಪ್ರಣಾಮಗಳನ್ನು ಸ್ವೀಕರಿಸಿ.
ಶ್ರೀಲ ಪ್ರಭುಪಾದರಿಗೆ ಜಯವಾಗಲಿ.

ಮೂಲ ನೆಲೆ: ಶ್ರೀ ಮಾಯಾಪುರ ಚಂದ್ರೋದಯ ಮಂದಿರ
ಶಿಬಿರ: ಇಸ್ಕಾನ್ ಚೆನ್ನೈ

ದಿನಾಂಕ: 4 ಡಿಸೆಂಬರ್ 2025

ಪ್ರಮುಖಾಂಶಗಳು

ನಾನು 24 ನವೆಂಬರ್ ರಾತ್ರಿ ಸಿಂಹದೇಶದಿಂದ ಚೆನ್ನೈಗೆ ಹಿಂತಿರುಗಿದೆ ಮತ್ತು ಆಗಿನಿಂದ ಇಲ್ಲಿ ಇದ್ದೇನೆ. ನಾನು ನೇಫ್ರಾಲಜಿಸ್ಟ್‌ರನ್ನು ಭೇಟಿ ಮಾಡಿ, ನನ್ನ ನಿಯಮಿತ ಡಯಾಲಿಸಿಸ್ ಮುಂದುವರಿಸಿಕೊಂಡೆ.

ಸಭೆಗಳು ಮತ್ತು ಇತರ ಸೇವೆಗಳ ಜೊತೆಗೆ, ರಂಗ ಕೃಷ್ಣ ದಾಸರು ನಿರ್ವಹಿಸುವ ಔಟ್‌ಪೋಸ್ಟ್ ಹಾಗೂ ಮುರಳಿ ಶ್ಯಾಮ ದಾಸರ ವಿಸ್ತರಣಾ ಕೇಂದ್ರಕ್ಕೂ ಭೇಟಿ ನೀಡಿ, ಅಲ್ಲಿ ತರಗತಿಗಳನ್ನು ನೀಡಿದೆ. ಚೆನ್ನೈನಲ್ಲಿ ಪ್ರಚಾರ ಕಾರ್ಯವು ವ್ಯಾಪಕವಾಗುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಯಿತು.

ಶ್ರೀಲ ಪ್ರಭುಪಾದರ ಸಂದೇಶ

ಶ್ರೀಲ ಪ್ರಭುಪಾದರು ಹೇಳುತ್ತಾರೆ, ಜನರು ವಿದ್ಯಾರ್ಥಿಯಾಗಿ ಬರುತ್ತಾರೆ, ನಂತರ ಅವರು ಶಿಕ್ಷಕರಾಗಿ ಮಾರ್ಪಡಬೇಕು.

“ಪ್ರತಿಯೊಬ್ಬ ವಿದ್ಯಾರ್ಥಿಗೂ ಆಚಾರ್ಯರಾಗಬೇಕೆಂಬ ನಿರೀಕ್ಷೆ ಇದೆ. ಆಚಾರ್ಯ ಎಂದರೆ ಶಾಸ್ತ್ರದ ನಿಯಮಗಳನ್ನು ತಿಳಿದು ಅವನ್ನು ಜೀವನದಲ್ಲಿ ಆಚಾರವಾಗಿ ಅನುಸರಿಸಿ, ತಮ್ಮ ಶಿಷ್ಯರಿಗೆ ಬೋಧಿಸುವವರು.”
— ಶ್ರೀಲ ಪ್ರಭುಪಾದರ ಪತ್ರ, ತುಷ್ಟ ಕೃಷ್ಣರ
ವರಿಗೆ, 2 ಡಿಸೆಂಬರ್ 1975, ನವದೆಹಲಿ

“ಅವರಿಗೆ ಭಗವದ್ಗೀತೆಯ ವಿಜ್ಞಾನವನ್ನು ಬೋಧಿಸಿ, ಕೃಷ್ಣನ ಪ್ರಥಮ ವರ್ಗದ ಪ್ರತಿನಿಧಿಗಳಾಗಿ ತರಬೇತುಗೊಳಿಸಬೇಕು. ಇದು ಕಷ್ಟವಲ್ಲ; ಕೇವಲ ಕೃಷ್ಣನಿಂದ ಬಂದ ಶ್ರೇಷ್ಠ ಪರಂಪರೆಯ ಪರಿಪೂರ್ಣ ಅದಮಧಿಕಾರಿಯಿಂದ ಕೇಳಿ, ಅದೇ ಸಂದೇಶವನ್ನು ಯಾವುದೇ ಬದಲಾವಣೆ ಇಲ್ಲದೆ ಪುನರಾವರ್ತನೆ ಮಾಡಬೇಕು. ಹೀಗೆ ಮಾಡಿದರೆ ವ್ಯಕ್ತಿ ಗುರು ಆಗಲು ಅರ್ಹನಾಗುತ್ತಾನೆ.”
— ಶ್ರೀಲ ಪ್ರಭುಪಾದರ ಪತ್ರ, ಜಯಧರ್ಮ ದಾಸರಿಗೆ, 20 ಆಗಸ್ಟ್ 1976, ಹೈದರಾಬಾದ್

ನನ್ನ ಸಂದೇಶ

ನನ್ನ ಎಲ್ಲಾ ಶಿಷ್ಯರು ಶ್ರೀಲ ಪ್ರಭುಪಾದರ ಪುಸ್ತಕಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿ ಭವಿಷ್ಯದಲ್ಲಿ ಶಿಕ್ಷಕರಾಗಬೇಕು. ಹೀಗೆ ನೀವು ಗುರುಗಳಾಗಬೇಕು. ಶಾಸ್ತ್ರಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಮೊದಲಿಗೆ ವಿದ್ಯಾರ್ಥಿಯಾಗಿರಬಹುದು, ಆದರೆ ಶಾಶ್ವತವಾಗಿ ವಿದ್ಯಾರ್ಥಿಯಾಗಿರಲು ಆಗದು. ಕೆಲವು ಕಾಲ ವಿದ್ಯಾರ್ಥಿ, ನಂತರ ಗುರು ಆಗಬೇಕು.

ನಮಗೆ ಮಾಯಾಪುರ ಇನ್ಸ್ಟಿಟ್ಯೂಟ್ ಮತ್ತು ಇತರ ಅನೇಕ ಸಂಸ್ಥೆಗಳು ಪದವಿಗಳನ್ನು ನೀಡುತ್ತಿವೆ. ನೀವು ಯಾವುದೇ ನಾಯಕತ್ವ ಹುದ್ದೆಯಲ್ಲಿ ಇದ್ದರೆ, ಮತ್ತು 40 ವರ್ಷಗಳಿಗಿಂತ ಹೆಚ್ಚಿನ ವಯಸ್ಸಿನವರು ಇದ್ದರೆ, ‘ಒನ್‌-ಟೈಮ್ ಸಮ್ಮೇಟಿವ್ ಟೆಸ್ಟ್’ ಅನ್ನು ಕೂಡ ಬರೆಯಬಹುದು.

ನಾನು ಪ್ರತಿದಿನ ಶ್ರೀಲ ಪ್ರಭುಪಾದರ ಪುಸ್ತಕಗಳನ್ನು ಓದುತ್ತೇನೆ. ನಾನು ಭಗವದ್ಗೀತೆಯನ್ನು ಹಲವಾರು ಬಾರಿ—ಬಹುಶಃ 20 ಬಾರಿ—ಓದಿದ್ದೇನೆ, ಆದರೂ ಈಗಲೂ ಓದುತ್ತಿದ್ದೇನೆ. ಪ್ರಸ್ತುತ 11ನೇ ಅಧ್ಯಾಯದಲ್ಲಿ ಇದ್ದೇನೆ.

ಪ್ರೇರಣಾದಾಯಕ ಕಥೆಗಳು

ಮುರಳಿ ಶ್ಯಾಮ ದಾಸರು, ಕೋವಿಡ್ ಲಾಕ್‌ಡೌನ್ ಎರಡನೇ ಅಲೆಯ ಸಮಯದಲ್ಲಿ ತಮ್ಮ ಆನ್‌ಲೈನ್ ಪ್ರಚಾರವನ್ನು ಆರಂಭಿಸಿದರು. ಇಂದು ಅವರು ದೊಡ್ಡ ಭಕ್ತಸಮುದಾಯವನ್ನು ನಿರ್ಮಿಸಿದ್ದಾರೆ. ಅವರು ತಮಿಳಿನಲ್ಲಿ ಪ್ರಚಾರ ಮಾಡುತ್ತಾರೆ.

700 ಪ್ರಾಮಾಣಿಕ ಆನ್‌ಲೈನ್ ಸೇವಕರು

4000 ಸಕ್ರಿಯ ಭಕ್ತರು

1000 ಕ್ಕೂ ಹೆಚ್ಚು ಮಂದಿ ಪ್ರತಿದಿನ 16 ಮಾಲೆಗಳು ಜಪಿಸುತ್ತಿದ್ದಾರೆ

ಅವರು ಅಕ್ಟೋಬರ್ 2024ರಲ್ಲಿ ಔಟ್‌ಪೋಸ್ಟಾಗಿ ಆರಂಭಿಸಿ, ಈಗ ಚೆನ್ನೈನಲ್ಲಿ ದೊಡ್ಡ ಪ್ರಚಾರ ಕೇಂದ್ರವಾಗಿ ಬೆಳೆದಿದೆ. ನಾನು ಭೇಟಿ ನೀಡಿದ ದಿನ 500 ಕ್ಕಿಂತ ಹೆಚ್ಚು ಭಕ್ತರು ಇದ್ದರು. ಮತ್ತೊಂದು ದಿನ ಆನ್‌ಲೈನ್ ತರಗತಿಯನ್ನು ನೀಡಿದ್ದಾಗ, ಸುಮಾರು 1300 ಭಕ್ತರು ಸೇರಿದ್ದರು.

ನಿಮ್ಮ ಆನ್‌ಲೈನ್ ಪ್ರಚಾರವನ್ನು ಯಶಸ್ವಿಯಾಗಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು, ಅವರಿಗೆ ಈ ಮೇಲ್ ಮೂಲಕ ಬರೆಯಬಹುದು:muralisyamdas@gmail.com

ಅವರು ಕಳೆದ 5 ವರ್ಷಗಳಿಂದ ಪ್ರತಿದಿನ ಬೆಳಗಿನ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಿರಂತರವಾಗಿ ನಡೆಸುತ್ತಿದ್ದು, ಪ್ರತಿದಿನ 1000 ಭಕ್ತರು ಭಾಗವಹಿಸುತ್ತಿದ್ದಾರೆ.

ಇಂಗ್ಲಿಷ್:

https://www.youtube.com/playlist?list=PLqIBxTTD_jfTq7BTzZs5o46VEdr8b3mLd

ಪೋರ್ಚುಗೀಸ್: Srimad Bhagavatam Primeiro Canto – YouTube

ಇಟಾಲಿಯನ್:

https://www.youtube.com/watch?v=gnsAjTDpJE8&list=PLqIBxTTD_jfR6a2DPMz5hjW4AGBVTWX4r

ಇಂದು, ನಾಮ ನಿಷ್ಠ ದಾಸರು ನನ್ನನ್ನು ಭೇಟಿ ಮಾಡಲು ಬಂದರು. ಅವರು ನನಗೆ ಅತ್ಯಂತ ಪ್ರೇರಣಾದಾಯಕವಾದ ಪ್ರಚಾರ ವರದಿಯನ್ನು ನೀಡಿದರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅವರು ತಮ್ಮ ಆನ್‌ಲೈನ್‌ ಪ್ರಚಾರವನ್ನು ಆರಂಭಿಸಿದ್ದರು. ಈಗ ಅವರು ಮಂಗಳೂರು ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ಥಾಪಿತವಾದ ಶ್ರೀ ಶ್ರೀ ರಾಧಾ ಗೋವಿಂದ ಮಂದಿರವನ್ನು ಹೊಂದಿದ್ದಾರೆ. ದೇವಾಲಯದ ಅಭಿವೃದ್ಧಿಯ ಬಗ್ಗೆ ಅವರು ಸವಿಸ್ತಾರವಾದ ನವೀಕರಣವನ್ನು ನೀಡಿದರು. ಅಲ್ಲಿ ನಡೆಯುತ್ತಿರುವ ಕ್ರಿಯೆಗಳು ಎಷ್ಟು ಸುಂದರವಾಗಿ ವಿಸ್ತರಿಸುತ್ತಿವೆ ಎಂಬುದನ್ನು ನೋಡಿ ನಾನು ತುಂಬಾ ಸಂತೋಷಪಟ್ಟೆ.

ಹೆಚ್ಚಿನ ಕಂಪನಿಗಳು ದೇವಾಲಯ ಅಭಿವೃದ್ಧಿಗೆ ಬೆಂಬಲ ನೀಡಲು ಮುಂದಾಗುತ್ತಿವೆ, ಇದು ದೇವಾಲಯದ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸಲು ಅವರಿಗೆ ಸಹಾಯ ಮಾಡುತ್ತದೆ.

ಅವರು ಭಗವದ್ಗೀತಾ ರೆಸಿಡೆನ್ಷಿಯಲ್ ಕಾಲೇಜನ್ನು ನಿರ್ಮಿಸುತ್ತಿದ್ದಾರೆ, ನನ್ನ ಶಿಷ್ಯರು ಶ್ರೀ ಚೈತನ್ಯರ ಚಳವಳಿಯನ್ನು ವಿಸ್ತರಿಸಲು ನನಗೆ ಸಹಾಯ ಮಾಡುತ್ತಿರುವುದಕ್ಕೆ ನಾನು ತುಂಬಾ ಕೃತಜ್ಞತೆಯುಳ್ಳವನಾಗಿದ್ದೇನೆ.

ನಿಮ್ಮೆಲ್ಲರಿಗೂ ಶ್ರೀಲ ಪ್ರಭುಪಾದರ ಪುಸ್ತಕ ಮ್ಯಾರಥಾನ್ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ನಿಮ್ಮ ಪ್ರಚಾರದ ಆಲೋಚನೆಗಳು ಮತ್ತು ವರದಿಗಳನ್ನು ನನಗೆ ಈ ವಿಳಾಸಕ್ಕೆ ಕಳುಹಿಸಬಹುದು:jayapataka@gmail.com

ಸದಾ ಶುಭಹಾರೈಸುವ ನಿಮ್ಮ,

ಜಯಪತಾಕ ಸ್ವಾಮಿ

JPS/rrsdb

ಆಪ್‌ಗಳು, ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಲಿಂಕ್‌ಗಳು

iOS ಅಪ್: https://apps.apple.com/us/app/id967072815

ಆಂಡ್ರಾಯ್ಡ್ ಅಪ್: https://play.google.com/store/apps/details?id=com.jayapatakaswami.jpsapp

ಅಧಿಕೃತ ವೆಬ್‌ಸೈಟ್: https://www.jayapatakaswami.com

ಉಪನ್ಯಾಸಗಳು (ಆಡಿಯೋ & ಲಿಖಿತರೂಪ): https://jayapatakaswamiarchives.net

ಯೂಟ್ಯೂಬ್ ಚಾನೆಲ್: http://youtube.com/jayapatakaswamiofficial

ಸೌಂಡ್‌ಕ್ಲೌಡ್ ಉಪನ್ಯಾಸಗಳು ಮತ್ತು ಕೀರ್ತನ: http://www.soundcloud.com/jayapatakaswami

ಫೇಸ್‌ಬುಕ್: http://www.facebook.com/Jayapatakaswami

ಟೆಲಿಗ್ರಾಂ ಚಾನೆಲ್: https://t.me/JayapatakaSwami

ವಾಟ್ಸಾಪ್ ಚಾನೆಲ್: https://whatsapp.com/channel/0029VaBTu8uIiRoqvPKige0G

ಇನ್‌ಸ್ಟಾಗ್ರಾಂ ಪುಟ: http://www.instagram.com/Jayapatakaswamionline

Translate »