ತ್ರಿವಿಕ್ರಮ ಮಾಸ
ಮಾಸಿಕ ಸಂದೇಶ (13 ಮೇ – 11 ಜೂನ್ 2025)
ನನ್ನ ಪ್ರೀತಿಯ ದೀಕ್ಷಾ, ಆಶ್ರಯ ಪಡೆದ, ಮಹತ್ವಾಕಾಂಕ್ಷಿ, ಶಿಕ್ಷಾ ಮತ್ತು ಹಿರಿಯ ಶಿಷ್ಯರೇ ಹಾಗು ಹಿತೈಷಿಗಳೇ,

ದಯವಿಟ್ಟು ನನ್ನ ಆಶೀರ್ವಾದ ಮತ್ತು ಶುಭಾಶಯಗಳನ್ನು ಸೂಕ್ತವಾಗಿ ಸ್ವೀಕರಿಸಿ.

ಶ್ರೀಲ ಪ್ರಭುಪಾದರಿಗೆ ಜಯವಾಗಲಿ

ಮೂಲ ನೆಲೆಯಿಂದ ಬರೆದ ಸ್ಥಳ: ಶ್ರೀಮಾಯಾಪುರ ಚಂದ್ರೋದಯ ಮಂದಿರ

ದಿನಾಂಕ: 11 ಜೂನ್ 2025

ನಾನು ಅಮೆರಿಕದ ಅಟ್ಲಾಂಟಾಗೆ ಪಾನಿಹಟಿ ಉತ್ಸವಕ್ಕೆ ಹೋಗಿ, ನಂತರ ಕೊಲ್ಕತ್ತಾ ರಥಯಾತ್ರೆಗೆ ಹಿಂದಿರುಗಬೇಕೆಂದು ಇಚ್ಛಿಸಿದೆ. ಆದರೆ ರಥಯಾತ್ರೆ ಜೂನ್ 27ರಂದು ಇದೆ, ನಂತರ ಜುಲೈ ಪ್ರಾರಂಭದಲ್ಲಿ ಬ್ಯೂರೋ ಸಭೆಗಳಿವೆ. ಆದ್ದರಿಂದ ನನ್ನ ಆರೋಗ್ಯ ತಂಡವು ಈ ಪ್ರಯಾಣ ತುಂಬಾ ಶೀಘ್ರವಾಗಿದ್ದು, ಅದು ನನಗೆ ತೊಂದರೆಯಾಗಬಹುದು ಎಂದು ಹೇಳಿ, ಉಲ್ಟಾ ರಥ ಯಾತ್ರೆಯ ನಂತರ ಪ್ರಯಾಣಿಸುವಂತೆ ಸಲಹೆ ನೀಡಿತು.

ಈ ವರ್ಷ ಅಟ್ಲಾಂಟಾದ ಪಾನಿಹಟಿಯ ಉತ್ಸವದ 50ನೇ ವಾರ್ಷಿಕೋತ್ಸವ. ನಾನು ಮೊಟ್ಟಮೊದಲು 1980ರಲ್ಲಿ ಅಲ್ಲಿ ಭೇಟಿಕೊಟ್ಟಾಗ, ಅವರು ಹೇಳಿದರು, “ಶ್ರೀಲ ಪ್ರಭುಪಾದರು ಈ ಮಂದಿರಕ್ಕೆ ‘ನ್ಯೂ ಪಾನಿಹಟಿ ಧಾಮ್’ ಎಂಬ ಹೆಸರು ನೀಡಿದರು” ಎಂದು. ಆದರೆ ಅವರಿಗೆ ಚಿಡಾ-ದಹಿ ಉತ್ಸವದ ಬಗ್ಗೆ ಅನುಭವವಿರಲಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಯಾರಿಗೂ ಪಾನಿಹಟಿಯ ಬಗ್ಗೆ ತಿಳಿದಿರಲಿಲ್ಲ, ಅದು ಏನೆಂಬುದು, ಏನು ಪ್ರತಿಪಾದಿಸುತ್ತದೆಯೆಂಬುದೂ ಗೊತ್ತಿರಲಿಲ್ಲ. ಆದರೆ ಚೈತನ್ಯ ಚರಿತಾಮೃತದಲ್ಲಿ ಪೂರ್ತಿಯಾಗಿ ಈ ಚಿಡಾ-ದಹಿ ಉತ್ಸವದ ಲೀಲೆಯನ್ನು ವರ್ಣಿಸಲಾಗಿದೆ. ಪಾನಿಹಟಿ, ಚೈತನ್ಯ ಮಹಾಪ್ರಭು ಅವರ ಲೀಲೆಗಳಲ್ಲೊಂದು ಬಹು ವಿಶಿಷ್ಟವಾದ ಸ್ಥಳ, ಮತ್ತು ನಿತ್ಯಾನಂದ ಪ್ರಭು ಜಗನ್ನಾಥಪುರಿಯಿಂದ ಕರೆದುಕೊಂಡು ಬಂದ ತಮ್ಮ ಸಂಕೀರ್ತನ ತಂಡವು ಬಂಗಾಳದಲ್ಲಿ ಮೊದಲು ಬಂದ ಸ್ಥಳವೇ ಪಾನಿಹಟಿ.

ಆಗ ನಾನು ಅಲ್ಲಿ ಭೇಟಿ ನೀಡಿದಾಗ, ನಾವು 18 ಬಗೆಯ ಚಿಡಾ-ದಹಿಯ ಉತ್ಸವವನ್ನು ಪ್ರಾರಂಭಿಸಿದೆವು. ನನ್ನ ಪೂರ್ವಾಶ್ರಮದ ತಾಯಿ ಒಮ್ಮೆ ಅಲ್ಲಿ ಬಂದಾಗ, ಅವರು ಚಿಡಾ-ದಹಿ ಪಾತ್ರೆಗಳನ್ನು ಹರಾಜು ಮಾಡುವುದು ಮತ್ತು ಮಂದಿರಕ್ಕಾಗಿ ನಿಧಿ ಸಂಗ್ರಹಿಸುವ ಸಲಹೆ ನೀಡಿದರು. ನಾವು ಪ್ರಯತ್ನ ಮಾಡಿದೆವು, ಅದು ಯಶಸ್ವಿಯಾಯಿತು. ನಂತರ ‘ನ್ಯೂ ಪಾನಿಹಾಟಿ ಧಾಮ್’ದಲ್ಲಿ ಸಮಯ ಉಳಿಸಲು ಕೆಲವು ಪಾತ್ರೆಗಳನ್ನು ಪ್ರಾಯೋಜಕರಿಗೆ ಮೀಸಲಿಟ್ಟು, 3 ಅಥವಾ 4 ಮಾತ್ರ ಹರಾಜು ಮಾಡಿದರು. ನಾನು ಕೇಳಿದೆವು, ಇಸ್ಕಾನ್ ಲಂಡನ್ನಲ್ಲಿ ಚಿಡಾ-ದಹಿ ಹರಾಜಿನ ಜೊತೆಗೆ ಭಕ್ತರನ್ನು ಪುಸ್ತಕ ಸಂಗ್ರಹಕ್ಕೆ ಪ್ರೇರೇಪಿಸುತ್ತಾರೆ ಎಂದು.

ಇಲ್ಲಿ ಮಾಯಾಪುರದಲ್ಲೂ ಬಹಳ ಉತ್ತಮವಾದ ಪಾನಿಹಟಿ ಉತ್ಸವವಾಯಿತು. ಮಾಯಾಪುರ ಧಾಮದ ಅಭಿವೃದ್ದಿಯು ಶ್ರೀಲ ಪ್ರಭುಪಾದರು ನನಗೆ ನೀಡಿದ ನಿರ್ದೇಶನಗಳಲ್ಲಿ ಒಂದಾಗಿದೆ. ಅವರು ಹೇಳಿದರು: “ನಾನು ನಿನಗೆ ಆಧ್ಯಾತ್ಮಿಕ ಲೋಕವನ್ನು ನೀಡಿದ್ದೇನೆ, ಈಗ ನೀನು ಇದನ್ನು ಅಭಿವೃದ್ಧಿ ಪಡಿಸು!” ಆಗಿನಿಂದ ನಾನು ಬಹುಮಟ್ಟಿಗೆ ಮಾಯಾಪುರದ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನಾನು ಮಾಯಾಪುರದಲ್ಲೇ ಇದ್ದೆ. ಆಗ ನಾವು ಪಾನಿಹಟಿ ಉತ್ಸವವನ್ನೂ ಆಚರಿಸದೆವು. ನಾನು ಸಹ ನಿರ್ದೇಶಕರಿಗೆ ಪ್ರತಿವರ್ಷ ನಡೆಸಲು ವಿನಂತಿಸಿದೆನು, ಅವರು ಒಪ್ಪಿಕೊಂಡರು. ಇನ್ನು ಮುಂದೆ ಪಂಚತತ್ತ್ವರ ಸಂತೋಷಕ್ಕಾಗಿ ವಾರ್ಷಿಕ ಉತ್ಸವವನ್ನಾಗಿ ಮಾಡುತ್ತಾರೆ ಎಂದರು. ಭಕ್ತರು ತುಂಬಾ ಉತ್ಸಾಹದಿಂದ ಭಾಗವಹಿಸಿದರು. ಈ ಬಾರಿ ಮಾಯಾಪುರದಲ್ಲಿ ಹರಾಜು ಮಾಡಲಿಲ್ಲ, ಆದರೆ ಮುಂದಿನ ವರ್ಷ ಮಾಡುತ್ತಾರೆ ಎಂದರು. ಭಕ್ತಿವಿಜಯ ಭಾಗವತ ಸ್ವಾಮಿಗಳು ಒಂದು ದಿನದ ನಿತಾಯ್ ಪಾನಿಹಟಿಯ ಮ್ಯಾರಥಾನ್ ನಡೆಸಿ 486 ಚೈತನ್ಯ ಚರಿತಾಮೃತ ಸೆಟ್ ಗಳನ್ನು ವಿತರಿಸಿದರು. ಶ್ರೀ ಮಾಯಾಪುರ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಮೇ 17ರಂದು ಪ್ರತ್ಯೇಕ ಪಾಣಿಹಟಿ ಉತ್ಸವವನ್ನೂ ಮಾಡಿದರು. ಜಗತ್ತಿನ ಅನೇಕ ಸ್ಥಳಗಳಲ್ಲಿ ಪಾಣಿಹಟಿ ಉತ್ಸವ ಆಚರಿಸಲಾಯಿತು.

ಶ್ರೀಲ ಪ್ರಭುಪಾದರು ನನಗೆ ಪಾಣಿಹಟಿಯಲ್ಲಿ ಒಂದು ಮಂದಿರ ನಿರ್ಮಿಸಲು ಸೂಚಿಸಿದರು. ನಾನು ಇನ್ನೂ ಇದರ ಸಲುವಾಗಿ ಕಾರ್ಯದರ್ಶಿಯೊಬ್ಬನನ್ನು ಹೊಂದಿಲ್ಲ. ಅವರು ಮೂಲ ಅಶ್ವತ್ಥ ಮರ ಇರುವ ಸ್ಥಳದಲ್ಲಿ ಮಂದಿರವಿರಬೇಕೆಂದು ಹೇಳಿದರು. ನೆಲ ಮಹಡಿ ತೆರೆಯಲಾಗಿದ್ದು, ದೇವರ ಸ್ಥಾನವು ಎರಡನೇ ಮಹಡಿಯಲ್ಲಿ ಇರಲಿದೆ.

ಇಂದು ಸ್ನಾನ ಪೂರ್ಣಿಮಾ, ರಾಜಾಪುರದಲ್ಲಿ ಬಹು ವಿಶೇಷವಾದ ಜಗನ್ನಾಥ, ಬಲಭದ್ರ, ಸುಭದ್ರಾ, ಸುದರ್ಶನರ ಸ್ನಾನಯಾತ್ರೆ ಉತ್ಸವವಿದೆ. ಭಕ್ತರು, ಗ್ರಾಮಸ್ಥರು ಬಂದು ದೇವರ ಸ್ನಾನ ಸೇವೆಯಲ್ಲಿ ಭಾಗವಹಿಸುತ್ತಾರೆ. ಕಳೆದ ತಿಂಗಳು ದಿಘಾ ಜಗನ್ನಾಥ ಮಂದಿರದ ಉದ್ಘಾಟನೆ ನಡೆಯಿತು. ರಾಧಾರಮಣ ದಾಸರಿಂದ ನಿಯಮಿತ ವರದಿಗಳು ಬರುತ್ತಿವೆ. ಅನೇಕ ವಿದೇಶಿ ಭಕ್ತರು ಆ ಮಂದಿರಕ್ಕೆ ಭೇಟಿ ನೀಡಿ ಕೀರ್ತನ, ಪುಸ್ತಕ ವಿತರಣೆ ಮತ್ತು ವಿವಿಧ ಸೇವೆಗಳಲ್ಲಿ ತೊಡಗಿದರು. ಸ್ಥಳೀಯ ಪತ್ರಿಕೆಗಳಲ್ಲೂ ಪ್ರಕಟವಾಯಿತು. ಸಾವಿರಾರು ಯಾತ್ರಿಕರು ಪ್ರತಿದಿನ ಭೇಟಿ ನೀಡುತ್ತಿದ್ದಾರೆ. ಮಾಯಾಪುರದ ಮತ್ತು ಮಾಯಾಪುರ ಇನ್ಸ್ಟಿಟ್ಯೂಟ್‌ನ ಭಕ್ತರೂ ಬಂದು ಸೇವೆ ಸಲ್ಲಿಸಿದರು. ಇದು ನಮಗೆ ಒಂದು ಉತ್ತಮ ಪ್ರಚಾರಾವಕಾಶವಾಗಿದೆ.

ನರಸಿಂಹ ಚತುರ್ದಶಿಯ ಒಂದು ವಾರದ ನಂತರ ನನಗೆ ಜ್ವರ ಬಂದು, ಸೋಂಕು ತಗುಲಿತ್ತು. ಚಿಕಿತ್ಸೆ ನೀಡಲಾಯಿತು. ನನ್ನ ಧ್ವನಿಯು ದುರ್ಬಲವಾಯಿತು ಮತ್ತು ಇಂದಿಗೂ ಹಾಗೆಯೇ ಇದೆ. ಆದರೂ ನಾನು ನನ್ನ ಸೇವೆಗಳನ್ನು ಮುಂದುವರಿಸುತ್ತಿದ್ದೇನೆ. ಪ್ರಭುಪಾದರು ಹೇಳಿದಂತೆ, ಒಂದು ಕ್ಷಣವನ್ನೂ ಕೃಷ್ಣ ಚಿಂತನೆ ಇಲ್ಲದೇ ವ್ಯರ್ಥ ಮಾಡಬಾರದು. ನಾನು ಪ್ರತಿದಿನ ಜಪ, ಪಾಠ, ಸಭೆಗಳಲ್ಲಿ ಭಾಗವಹಿಸುವುದು, ಶಿಷ್ಯರಿಗೆ ದೀಕ್ಷೆ ನೀಡುವುದು, ಉತ್ಸವಗಳಲ್ಲಿ ಭಾಗವಹಿಸುವುದನ್ನು ಮಾಡುತ್ತಿದ್ದೇನೆ. ಕೆಲವು ಸಲ ನನ್ನ ಕಾರ್ಯದರ್ಶಿಗಳು ಧ್ವನಿಗೆ ವಿಶ್ರಾಂತಿ ನೀಡಬೇಕೆಂದು ಸಲಹೆ ನೀಡುತ್ತಾರೆ. ಆಗ ನಾನು ಪಠ್ಯಗಳನ್ನು ಕೇಳಿ, ಕೈ ಚಲನೆ ಅಥವಾ ಅಲ್ಪ ಪದಗಳೊಂದಿಗೆ ಉತ್ತರಿಸುತ್ತೇನೆ. ಡಯಾಲಿಸಿಸ್ ಕೊಠಡಿಯಲ್ಲಿ ಒಂದು ದೊಡ್ಡ ಪರದೆಯಿದ್ದು, ನಾನು ಡಯಾಲಿಸಿಸ್ ಸಮಯದಲ್ಲಿ ಭಕ್ತರಿಂದ ವೀಡಿಯೋ ವರದಿಗಳನ್ನು ವೀಕ್ಷಿಸುತ್ತೇನೆ. ಇನ್ನಷ್ಟು ಶಿಷ್ಯರು ವೀಡಿಯೋ ವರದಿಗಳನ್ನು ಕಳುಹಿಸಿದರೆ ನನಗೆ ಸಂತೋಷವಾಗುತ್ತದೆ.

ನಾನು ಬಯಸುವುದು ಏನೆಂದರೆ, ಎಲ್ಲ ಭಕ್ತರೂ ತಮ್ಮ ಭಕ್ತಿಸೇವೆಯಲ್ಲಿ ಬಹು ಉತ್ಸಾಹದಿಂದ ತೊಡಗಬೇಕು. ಆಗ ಅವರು ಶೀಘ್ರವಾಗಿ ಕೃಷ್ಣ ಭಕ್ತಿಯಲ್ಲಿ ಪ್ರಗತಿ ಹೊಂದುತ್ತಾರೆ. ನಾನು ಮೊಂಟ್ರಿಯಾಲ್‌ನಲ್ಲಿ ಮೊದಲ ವರ್ಷದಲ್ಲೇ 3ನೇ ಅಧ್ಯಕ್ಷನಾಗಿ ಆಯ್ಕೆಯಾದೆನು. ಏಕೆಂದರೆ ಪ್ರಭುಪಾದರು ನೀಡಿದ ಸೇವೆಯೆಲ್ಲಾ ನಾನು ಉತ್ಸಾಹದಿಂದ ಸ್ವೀಕರಿಸುತ್ತಿದ್ದೆ. ಎಲ್ಲಾ ಭಕ್ತರೂ ತಮ್ಮ ಸೇವೆಯಲ್ಲಿ ಪ್ರಗತಿ ಸಾಧಿಸಬೇಕು, ಭಕ್ತಿ ಯೋಗ ಸಾಗರದ ಅಮೃತವನ್ನು ಅನುಭವಿಸಬೇಕೆಂದು ನಾನು ಬಯಸುತ್ತೇನೆ. ಭಕ್ತಿ ಯೋಗವೆಂದರೆ ಅಮೃತ ಸಾಗರ. ಆದರೆ ನಾವು ನಿಯಮಿತವಾಗಿ ಜಪ ಮಾಡಬೇಕು, ನಿಯಮಗಳನ್ನು ಅನುಸರಿಸಬೇಕು. ನಾನು ಎಲ್ಲರಲ್ಲೂ ಕನಿಷ್ಠ 16 ಸುತ್ತು ಜಪ ಮಾಡುವುದನ್ನು ಮತ್ತು ನಾಲ್ಕು ನಿಯಮಗಳನ್ನು ತಪ್ಪದೆ ಪಾಲಿಸುವುದನ್ನು ನಿರೀಕ್ಷಿಸುತ್ತೇನೆ.

ಚೈತನ್ಯ ಮಹಾಪ್ರಭು ಅವರ ಶಿಕ್ಷಾಷ್ಟಕದ ಮೊದಲ ಶ್ಲೋಕದಲ್ಲಿ, “ಹರೇ ಕೃಷ್ಣ” ಎಂಬ ನಾಮಜಪವು ಹೃದಯದ ಕನ್ನಡಿಯನ್ನು ಶುದ್ಧಮಾಡುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಕೆಲ ಭಕ್ತರು ನನಗೆ ಬರೆದು ಹೇಳಿದ್ರು ಅವರು ಅಜಾಗರೂಕತೆಯಿಂದ ಮಾಂಸಾಹಾರಿ ಅಂಶವಿರುವ ಆಹಾರ ಸೇವಿಸಿದರು ಎಂದು. ನಾವು ಅಗತ್ಯವಾಗಿ ಪದಾರ್ಥಗಳನ್ನು ಪರಿಶೀಲಿಸಬೇಕು—ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ ಇತ್ಯಾದಿ ಇದೆಯೇ ಎಂದು. ನಾನು ಪ್ರಯಾಣಿಸುತ್ತಿದ್ದಾಗ ಪ್ರಸಾದವನ್ನು ಕೊಂಡೊಯ್ಯುತ್ತೇನೆ ಮತ್ತು ಅದನ್ನಷ್ಟೆ ಸೇವಿಸುತ್ತೇನೆ. ವಿಮಾನದಲ್ಲಿಯೂ ಹಣ್ಣು ಅಥವಾ ಸಲಾಡ್ ಮಾತ್ರ ಸೇವಿಸುತ್ತೇನೆ. ನಾವು ಅವುಗಳ ಮೇಲೆ ಅವಲಂಬಿಸಬಹುದು. ಮಾಂಸಾಹಾರ, ಅಕ್ರಮ ಸಂಭೋಗ, ಜೂಜು, ಮಾದಕ ದ್ರವ್ಯ ಸೇವನೆ—ಇವೆಲ್ಲಾ ಅಪರಾಧವಾಗಿವೆ.

ನನ್ನ ಎಲ್ಲ ಶಿಷ್ಯರು ಶ್ರೀಲ ಪ್ರಭುಪಾದರ ಪುಸ್ತಕಗಳನ್ನು ಪಠಿಸಬೇಕು, ಪದವಿಗಳನ್ನು ಪಡೆಯಬೇಕು ಮತ್ತು ಪ್ರಚಾರ ಮಾಡಬೇಕು. ಅವರು ಪಾಠಿಸುತ್ತಿರುವುದನ್ನು ಅವರು ತಮ್ಮ ಜೀವನದಲ್ಲೂ ಅನುಸರಿಸಬೇಕು. ಹಿರಿಯ ಭಕ್ತರು ಕಿರಿಯರ ಪ್ರತಿ ಜವಾಬ್ದಾರಿ ವಹಿಸಬೇಕು. ಭಕ್ತನು ಎಂದರೆ ಶ್ರದ್ಧಾಳು ಮತ್ತು ಕಾಳಜಿಯುತ ವ್ಯಕ್ತಿ. ಮೊದಲು ಅವರು ತಮ್ಮ ಆತ್ಮಾನುಷ್ಠಾನದಿಂದ ತಮ್ಮನ್ನು ಅರ್ಹರಾಗಿಸಿಕೊಳ್ಳಬೇಕು. ಒಂದು ಕಥೆ ಇದೆ: ಮಗನೊಬ್ಬನು ನದಿಗೆ ಬಿದ್ದನು, ತಂದೆ ಉಳಿಸಲು ಜಿಗಿದ, ಆದರೆ ತಂದೆಗೆ ಈಜು ಬರುವುದಿಲ್ಲ. ಇಬ್ಬರೂ ಮೃತರಾದರು. ಹಾಗೆಯೇ, ನಾವು ಯಾರಿಗಾದರೂ ಸಹಾಯ ಮಾಡಬೇಕಾದರೆ, ಮೊದಲು ನಾವು ಅರ್ಹರಾಗಿರಬೇಕು. ಈಗ ನೀವು ವಿದ್ಯಾರ್ಥಿಯಾಗಿರಬಹುದು, ಆದರೆ ಮುಂದೆ ಶಿಕ್ಷಕರಾಗಲಿದ್ದೀರಿ. ಆದ್ದರಿಂದ ಅದಕ್ಕಾಗಿ ತಯಾರಿ ಅಗತ್ಯ.

ನಾನು ನಿಮ್ಮೆಲ್ಲರ ಭಕ್ತಿಸೇವೆಯಲ್ಲಿನ ದೃಢತೆಯನ್ನು ಪ್ರಾರ್ಥಿಸುತ್ತಿದ್ದೇನೆ.

ಸದಾ ನಿಮ್ಮ ಶ್ರೇಯೋಭಿಲಾಷಿ ,
ಜಯಪತಾಕ ಸ್ವಾಮಿ
JPS/ssdb